Post by Suhas Bhokare
Computer Software Professional
ಮೈಸೂರಿನ ಮನೆಯೊಳಗೆ ನುಗ್ಗಿದ ಚಿರತೆ: ವೃದ್ಧ ಅಮ್ಮನ ಹೊರಗೆಳೆದು, ಕೋಣೆಯೊಳಗೆ ಕೂಡಿಹಾಕಿದ ಮಗಳು! | Leopard Enters House Siddhartha Layout Mysuru Woman Rescues Mother Courageous Act Sat ಮೈಸೂರಿನ ಸಿದ್ದಾರ್ಥ ಬಡಾವಣೆಯ ಮನೆಯೊಂದಕ್ಕೆ ಚಿರತೆ ನುಗ್ಗಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಮನೆಯಲ್ಲಿದ್ದ ಸುಜಾತಾ ಎಂಬ ಮಹಿಳೆ ಸಮಯಪ್ರಜ್ಞೆ ಮೆರೆದು, ಚಿರತೆ ಇದ್ದ ಕೊಠಡಿಯಿಂದ ತನ್ನ ತಾಯಿಯನ್ನು ರಕ್ಷಿಸಿ ಬಾಗಿಲು ಹಾಕಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆ ಹಿಡಿದಿದ್ದಾರೆ. ಮೈಸೂರು (ಏ.17): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಿರತೆಗಳ ಆತಂಕ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಕಾಡಿನ ಅಂಚಿನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಚಿರತೆಗಳು ಈಗ ನೇರವಾಗಿ ಜನರ ಮನೆಗೇ ನುಗ್ಗುತ್ತಿವೆ. ಇಂದು ಮೈಸೂರಿನ ಸಿದ್ದಾರ್ಥ ಬಡಾವಣೆಯಲ್ಲಿ ಇಂತಹದ್ದೇ ಒಂದು ಮೈ ನಡುಗಿಸುವ ಘಟನೆ ನಡೆದಿದೆ....