Post by Greater Bengaluru Authority

ಗ್ರೇಟರ್ ಬೆಂಗಳೂರು ಪ್ರಾಧಿಕಾರ

📞 ಫೋನ್–ಇನ್ ಕಾರ್ಯಕ್ರಮದ ಮೂಲಕ ಸಾರ್ವಜನಿಕ ಅಹವಾಲು ಸ್ವೀಕಾರ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಇಂದು ಸಂಜೆ 5.00 ಗಂಟೆಗೆ ಐಪಿಪಿ ಸೆಂಟರ್ ಆಯುಕ್ತರ ಕಚೇರಿಯಲ್ಲಿ ಫೋನ್–ಇನ್ ಕಾರ್ಯಕ್ರಮ ಆಯೋಜಿಸಲಾಯಿತು. ಪಾಲಿಕೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ. ರವರು ನಾಗರಿಕರಿಂದ ನೇರವಾಗಿ ಕರೆಗಳ ಮೂಲಕ ಅಹವಾಲುಗಳನ್ನು ಸ್ವೀಕರಿಸಿ, ವಿವಿಧ ವಾರ್ಡ್‌ಗಳಿಂದ ಬಂದ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. 📌 BDA ಸಂಬಂಧಿತ ಆಸ್ತಿ ತೆರಿಗೆ ಕುರಿತು ಬಂದ ಅಹವಾಲಿನ ಹಿನ್ನೆಲೆಯಲ್ಲಿ, ಪ್ರಸಕ್ತ ಸಾಲಿನ ತೆರಿಗೆ ವಸೂಲಿ ಮಾಡಿ BDA ಸ್ವತ್ತುಗಳನ್ನು ಅಭಿವೃದ್ಧಿಪಡಿಸಿ ಪಾಲಿಕೆಗೆ ಹಸ್ತಾಂತರಿಸುವಂತೆ ಆಡಳಿತ ವಿಭಾಗದ ಮೂಲಕ BDA ಆಯುಕ್ತರ ಕಚೇರಿಗೆ ಪತ್ರ ಬರೆಯಲು ನಿರ್ದೇಶನ ನೀಡಿದರು. ☎️ ಇಂದಿನ ಕಾರ್ಯಕ್ರಮದಲ್ಲಿ ಒಟ್ಟು 18 ಕರೆಗಳು ಬಂದಿದ್ದು, ಕೆಲವು ಸಮಸ್ಯೆಗಳ ಪರಿಹಾರಕ್ಕಾಗಿ ಅಧಿಕಾರಿಗಳಿಗೆ ಖುದ್ದಾಗಿ ಕರೆ ಮಾಡಿ ತಕ್ಷಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು. 🙏 ಕೆಲ ನಾಗರಿಕರು ತಮ್ಮ ಹಿಂದಿನ ಅಹವಾಲುಗಳು ಪರಿಹಾರಗೊಂಡಿರುವುದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಉಪ ಆಯುಕ್ತರು (ಆಡಳಿತ) ಸಾಯಿದ ಆಫ್ರಿನ ಭಾನು, ಅಧೀಕ್ಷಕ ಅಭಿಯಂತರರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. #GreaterBengaluruAuthority #WestCityCorporation #DrRajendraKV #PhoneInProgramme #CitizenGrievances #PublicService #DKShivakumar DK Shivakumar

Post contentPost contentPost contentPost content