Post by Cauvery Handicrafts - KSHDCL

421 followers

ದಿನಾಂಕ 17-01-2021 #ಇಂದು ಚನ್ನಪಟ್ಟಣದಲ್ಲಿರುವ ಉತ್ದಾದನಾ ಘಟಕಕ್ಕೆ ಭೇಟಿ ನೀಡಲಾಯಿತು. ಅಲ್ಲಿನ ಗೊಂಬೆಗಳ ತಯಾರಿಕೆ ಹಾಗೂ ಶ್ರೀಗಂಧದಿಂದ ತಯಾರಾಗುವ ವಸ್ತುಗಳನ್ನ ಪರಿಶೀಲನೆ ಮಾಡಲಾಯಿತು. ಜೊತೆಗೆ, ಅಲ್ಲಿನ ಕರಕುಶಲ ಕರ್ಮಿಗಳೊಂದಿಗೆ ಮಾತುಕತೆ ನಡೆಸಲಾಯಿತು.‌ ಕರಕುಶಲ ಅಭಿವೃದ್ಧಿ ನಿಗಮದಿಂದ ಸುಮಾರು 254 ಮನೆಗಳನ್ನು ನಿರ್ಮಿಸಲಾಗಿತ್ತು. ಆದರೆ ಅವರಿಗೆ ಇದುವರೆಗೂ ಹಕ್ಕು ಪತ್ರ ತಲುಪಿಲ್ಲದರ ಬಗ್ಗೆ ಅಲ್ಲಿನ ಕುಶಲಕರ್ಮಿಗಳು ನನ್ನ ಗಮನಕ್ಕೆ ತಂದರು. ಅಲ್ಲಿರುವ ಎಲ್ಲಾ ಕಾರ್ಮಿಕರಿಗೆ ವಸತಿ ಹಕ್ಕು ಪತ್ರಗಳನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಚನ್ನಪಟ್ಟಣ ಗೊಂಬೆಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಸ್ಥಾನ ಇದೆ. ಈ ನಿಟ್ಟಿನಲ್ಲಿ ಗೊಂಬೆಗಳ ಪ್ರದರ್ಶನ ಮತ್ತು ಇಂದಿನ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಗೊಂಬೆಗಳನ್ನು ತಯಾರು ಮಾಡುವುದಕ್ಕೆ ಅಗತ್ಯವಾಗುವ ಎಲ್ಲಾ ಸೌಲಭ್ಯಗಳನ್ನ ನಿಗಮದಿಂದ ಒದಗಿಸುವ ಭರವಸೆ ನೀಡಲಾಯಿತು. ಇಲ್ಲಿರುವ ಕರಕುಶಲಕರ್ಮಿಗಳಿಗೆ, ಗೊಂಬೆ ತಯಾರಿಕೆ ಬಿಟ್ಟು ಬೇರೆನೂ ಕೆಲಸ ಗೊತ್ತಿಲ್ಲ. ಹೀಗಾಗಿ ಅವರ ಈ ಕುಲ ವೃತ್ತಿಗೆ ಅಗತ್ಯವಾಗುವ ಎಲ್ಲಾ ಸೌಲಭ್ಯಗಳನ್ನು ನಿಗಮದ ವತಿಯಿಂದ ನೀಡುವ ಭರವಸೆ ನೀಡಿದೆನು. ಅದನ್ನ ಅದಷ್ಟು ಬೇಗ ಇತ್ಯರ್ಥ ಮಾಡುವ ಯೋಜನೆ ಅಧಿಕಾರಿಗಳ ಮುಂದಿಟ್ಟಿದ್ದೇನೆ. ಡಾ. ಬೇಳೂರು ರಾಘವೇಂದ್ರ ಶೆಟ್ಟಿ ಅಧ್ಯಕ್ಷರು ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತ #KSHDCL #CauveryHandicrafts #Cauveryhandicraftsemporium #Karnataka #DrBelurRaghavendraShetty #craftman #sandalwood #channapatna

Post contentPost contentPost contentPost contentPost contentPost contentPost content